ಶಿವಮೊಗ್ಗ : ದೇಶ ವಿಭಜನೆ ಸಂದರ್ಭದ ಕರಾಳ ದಿನಗಳನ್ನು ಪ್ರತಿಬಿಂಬಿಸುವ ಮೂರು ದಿನಗಳ ಛಾಯಚಿತ್ರ ಪ್ರದರ್ಶನ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಛಾಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ್ರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಸಂತೋಷದ ದಿನ. ಆದರೂ ಕೂಡ, ಒಂದು ದಿನ ಹಿಂದೆ ಅಖಂಡ ಭಾರತ ಭೌಗೊಳಿಕವಾಗಿ ವಿಭಜನೆಗೊಂಡಿತು. ಇದರ ಮಾಹಿತಿ ಜನರಿಗೆ ತಲುಪುವ ಉದ್ದೇಶದಿಂದ ಕೇಂದ್ರದ ವಿವಿಧ ಇಲಾಖೆಯಲ್ಲಿ ದೇಶ ವಿಭಜನೆಯ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಇನ್ನು ೩ ದಿನಗಳ ಕಾಲ ಈ ಪ್ರದರ್ಶನವಿದ್ದು ಸಾರ್ವಜನಿಕರು ವೀಕ್ಷಿಸಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ವಾರ್ತಾ ಇಲಾಖೆಯ ಅಧಿಕಾರಿಗಳು, ರೈಲ್ವೆ ಅಧಿಕಾರಿಗಳು ಮತ್ತಿರರು ಉಪಸ್ಥಿತರಿದ್ದರು.