ಶಿವಮೊಗ್ಗ : ನಗರದ ಪರಿಸರ ಕಳಶದಂತಿರುವ ರಾಗಿಗುಡ್ಡವನ್ನು ಸರ್ಕಾರವು ನಾನಾ ಯೋಜೆನೆಗಳಿಗೆ ನೀಡಿದೆ.ಹೀಗಾಗಿ ರಾಗಿಗುಡ್ಡ ಇನ್ನು ಕೆಲವೇ ವರ್ಷಗಳಲ್ಲಿ ಇತಿಹಾಸದ ಪುಟಗಳನ್ನು ಸೇರುತ್ತ ಸಾಗಿದೆ, ಆದ್ದರಿಂದ ರಾಗಿಗುಡ್ಡವನ್ನು ಜೈವಿಕ ಅರಣ್ಯ ಪ್ರದೇಶವಾಗಿ ಘೋಷಿಸಬೇಕೆಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆ ಆಗ್ರಹಿಸಿದೆ.
ಕೇವಲ ಇಎಸ್‌ಐ ಆಸ್ಪತ್ರೆಗಾಗಿ 5 ಎಕರೆ ನೀಡಿದ ಪರಿಣಾಮದಿಂದಾಗಿ 40 ರಿಂದ 50 ಅಡಿಗಳಷ್ಟು ರಾಗಿಗುಡ್ಡ ನೆಲಸಮವಾಗಿದೆ. ಮೇಲ್ಮಣ್ಣನ್ನು ತೆಗೆಯಲಾಗ್ತಾಯಿದೆ. ಬಂಡೆಗಳನ್ನು ಒಡೆಯುವ ಕಾರಣ ನೀಡಿ ಸ್ಪೋಟಕಗಳನ್ನು ಬಳಸಲಾಗುತ್ತಿದೆ. ಹಲವು ಯೋಜನೆಗಳಿಗೆ ರಾಗಿಗುಡ್ಡದ ಜಾಗವನ್ನು ನೀಡಲಾಗಿದ್ದು, ಇದರಿಂದಾಗಿ ನಾವು ರಾಗಿಗುಡ್ಡವನ್ನೆ ಕಳೆದುಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಹಾಗೇನೆ ರಾಗಿಗುಡ್ಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಜಮೀನುಗಳನ್ನು ಜಿಲ್ಲಾಡಳಿತ ತಕ್ಷಣ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.