ಶಿವಮೊಗ್ಗ : ಗಣರಾಜ್ಯೋತ್ಸವ ದಿನಾಚರಣೆಯಂದು ರಾಯಚೂರು ಕೋರ್ಟ್ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಂದು ಅಲ್ಲಿನ ನ್ಯಾಯಾಧೀಶರು, ಅಂಬೇಡ್ಕರ್ ಫೋಟೋ ಇಟ್ಟರೆ ನಾನು ಧ್ಯಜಾರೋಹಣ ಮಾಡುವುದಿಲ್ಲ ಎಂದು ಹೇಳಿ, ಅಂಬೇಡ್ಕರ್ ಅವರ ಫೋಟೋ ತೆಗೆಸಿರುವ ಘಟನೆಯನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಿಎಸ್‌ಎಸ್‌ನ ರಾಜ್ಯ ಸಂಚಾಲಕ ಗುರುಮೂರ್ತಿ, ಅಂಬೇಡ್ಕರ್‌ಗೆ ಅಗೌರವ ತೋರಿರುವ ಈ ನ್ಯಾಯಾಧೀಶರನ್ನ ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಇವರ ವಿರುದ್ಧ ಪರಿಶಿಷ್ಟ ಜಾತಿ ಆಥವಾ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಬೇಕು. ರಾಷ್ಟ್ರ ನಾಯಕನಾಗಿರುವ ಅಂಬೇಡ್ಕರ್‌ಗೆ ಅವಮಾನ ಮಾಡಿರುವುದರಿಂದಾಗಿ ಇವರ ಮೇಲೆ ದೇಶದ್ರೋಹ ಕೇಸನ್ನ ಕೂಡ ದಾಖಲಿಸಬೇಕೆಂದು ಆಗ್ರಹಿಸಿದರು.