ಹೈಲೆಟ್ಸ್ :
ನವರಾತ್ರಿಗೆ ಕರೆಂಟ್ ಶಾಕ್
ಶಾಕ್ ಕೊಟ್ಟ ಕರ್ನಾಟಕ ಸರಕಾರ
ಏಪ್ರಿಲ್‌ನಲ್ಲಿ ವಿದ್ಯುತ್ ದರ ಹೆಚ್ಚಳ
ಅಕ್ಟೋಬರ್ 1 ರಿಂದಲೇ ಹೆಚ್ಚಳ
ಬೆಸ್ಕಾಂನಲ್ಲಿ ಪ್ರತಿ ಯುನಿಟ್‌ಗೆ 43 ಪೈಸೆ ಹೆಚ್ಚಳ
ಮೆಸ್ಕಾನಲ್ಲಿ ಪ್ರತಿ ಯುನಿಟ್‌ಗೆ 24 ಪೈಸೆ ಹೆಚ್ಚಳ
ಹೆಸ್ಕಾಂ, ಜೆಸ್ಕಾಂ 35 ಪೈಸೆ ಹೆಚ್ಚಳ
ಬೆಂಗಳೂರು : ವಿದ್ಯುತ್ ದರ ಹೆಚ್ಚಿಸಿ, ಇನ್ನೂ ಮೂರು ನಾಲ್ಕು ತಿಂಗಳು ಕಳೆದಿಲ್ಲ. ಆಗಲೇ ಸರಕಾರ ಮತ್ತೊಮ್ಮೆ ವಿದ್ಯುತ್ ದರ ಹೆಚ್ಚಳಕ್ಕೆ ಸರಕಾರ ಅಸ್ತು ಎಂದಿದೆ. ಹೌದು, ಅಕ್ಟೋಬರ್ ೧ ರಿಂದ ರಾಜ್ಯದ ಜನತೆ ಹೆಚ್ಚುವರಿ ವಿದ್ಯುತ್ ಬಿಲ್ ತೆರಬೇಕಾಗುತ್ತದೆ. ಇಂಧನ ಹೊಂದಾಣಿಕೆ ಶುಲ್ಕ ಸರಿತೂಗಿಸುವ ಭಾಗವಾಗಿ ವಿದ್ಯುತ್ ದರ ಹೆಚ್ಚಳ ಮಾಡಲಾಗುತ್ತಿದೆ. ಎಲ್ಲಾ ಎಸ್ಕಾಮ್‌ಗಳಲ್ಲಿ ವಿದ್ಯುತ್ ದರ ಹೆಚ್ಚಾಗಲಿದೆ.
ಆದೇಶದ ಪ್ರಕಾರ, ಬೆಸ್ಕಾಮ್ ವ್ಯಾಪ್ತಿಯಲ್ಲಿ ಗ್ರಾಹಕರಿ ಪ್ರತಿ ಯುನಿಟ್‌ಗೆ ೪೩ ಪೈಸೆ, ಮೆಸ್ಕಾಮ್‌ನಲ್ಲಿ ಪ್ರತಿ ಯುನಿಟ್‌ಗೆ ೨೪ ಪೈಸೆ ಹೆಚ್ಚಳವನ್ನು ಗ್ರಾಹಕರು ಭರಿಸಬೇಕಾಗುತ್ತದೆ. ಸಿಎಸ್‌ಎಸ್‌ಸಿಯ ವ್ಯಾಪ್ತಿಗೆ ಬರುವ ಗ್ರಾಹಕರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ ೩೫ ಪೈಸೆ ಹಚ್ಚಳವಾಗಲಿದ್ದರೆ, ಹೆಸ್ಕಾಮ್ ಹಾಗೂ ಜೆಸ್ಕಾಮ್ ಗ್ರಾಹರಿಗೆ ಪ್ರತಿ ಯುನಿಟ್ ಗೆ ೩೫ ಪೈಸೆ ಹೆಚ್ಚಳವಾಗಲಿದೆ.
ಇದಕ್ಕೂ ಮುನ್ನ ಜುಲೈ ೨೦೨೨ ರಿಂದ ಡಿಸೆಂಬರ್ ೨೦೨೨ ರ ಅವಧಿಗೆ ಪ್ರತಿ ಯುನಿಟ್ ವಿದ್ಯುತ್ ದರವನ್ನು ೨೧ ಪೈಸೆಯಿಂದ ೩೧ ಪೈಸೆ ವರೆಗೆ ಏರಿಕೆ ಮಾಡಲು ಅನುಮತಿ ನೀಡಲಾಗಿತ್ತು. ಏಪ್ರಿಲ್ ೧ ರಂದು ಕೆಇಆರ್‌ಸಿ ಸರಾಸರಿ ವಿದ್ಯುತ್ ದರವನ್ನು ಪ್ರತಿ ಯುನಿಟ್ ಗೆ ೩೫ ಪೈಸೆಯಷ್ಟು ಹೆಚ್ಚಳ ಮಾಡಿತ್ತು. ಕಲ್ಲಿದ್ದಲು ಹಾಗೂ ಸ್ಟಾಕ್ ಲಭ್ಯತೆಯ ಆಧಾರದಲ್ಲಿ ಬೆಲೆ ಏರಿಕೆ ಮಾಡಲಾಗುತ್ತದೆ.