ಕೋಟಿ ಗಾಯಿತ್ರಿ ಜಪದ ಸಾಂಗತ ಯಜ್ಞ 

ಶಿವಮೊಗ್ಗ : ಜಿಲ್ಲಾ ಬ್ರಾಹ್ಮಣ ಸಭಾದಿಂದ ಕೋಟಿ ಗಾಯಿತ್ರಿ ಜಪದ ಸಾಂಗತ ಯಜ್ಞವನ್ನು ನಡೆಸಲಾಗಿದೆ. ಕಳೆದ ವರ್ಷದ ಮಾಡಿದ್ದ ಸಂಕಲ್ಪದಂತೆ ಒಂದು ಕೋಟಿ 50 ಲಕ್ಷ ಗಾಯಿತ್ರಿ ಮಂತ್ರ ಜಪ ಯಜ್ಞ ಸಂಪೂರ್ಣವಾಗಿದೆ.

ಈ ಹಿನ್ನೆಲೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಆವರಣದಲ್ಲಿ 24 ಸಾವಿರ ಗಾಯಿತ್ರಿ ಮಂತ್ರದೊಂದಿಗೆ ಹೋಮ ನಡೆಯಿತು. ಇದರ ಜೊತೆಗೆ ರಾಮನವಮಿ ಅಂಗವಾಗಿ ರಾಮತಾರಕ ಜಪ ಯಜ್ಞ ಕೂಡ ಆಯೋಜನೆ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಬ್ರಾಹ್ಮಣ ಸಮಾಜದ ಜನರು ಯಜ್ಞದಲ್ಲಿ ಭಾಗಿಯಾಗಿದ್ದರು.