ಶಿವಮೊಗ್ಗ : ನಗರದ ಇಎಸ್‌ಐ ಚಿಕಿತ್ಸಾಲಯದಲ್ಲಿ ೨ಕೋಟಿ ೮೮ ಲಕ್ಷ ರೂಪಾಯಿ ಹಗರಣ ನಡೆದಿದೆ. ಹೀಗಂತ ನಾವು ಆರೋಪ ಮಾಡ್ತಾ ಇಲ್ಲ. ಇಎಸ್‌ಐ ಸಂಘದ ಪದಾಧಿಕಾರಿಗಳೇ ಈ ಆರೋಪ ಮಾಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮತಾಡಿದ ಶಿವಮೊಗ್ಗ ಜಿಲ್ಲಾ ಖಾಸಗೀ ಕಾರ್ಖಾನೆ ಹಾಗೂ ಇತರೆ ಸಂಘಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ನಟರಾಜ್ ಇಎಸ್‌ಐ ಚಿಕಿತ್ಸಾಲಯದಲ್ಲಿ ಬಡ ಕಾರ್ಮಿಕರ ವೈದ್ಯಕೀಯ ವೆಚ್ಚದ ಮರು ಪಾವತಿ ಹಣವನ್ನ ವಿಮಾದಾರರಿಗೆ ನೀಡದೆ ನಕಲಿ ಸಹಿ ಹಾಕಿ ಈ ಹಣವನ್ನ ಲೂಟಿ ಮಾಡಲಾಗಿದೆ. ಈ ವಿಚಾರವನ್ನ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರ ಗಮನಕ್ಕೂ ತರಲಾಗಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದರು. ಹೀಗಾಗಿ ಈ ವಿಚಾರವಾಗಿ ನ್ಯಾಯಾಲಯದ ಮೂಲಕ ಎಸಿಬಿ ಮೊರೆ ಹೋಗುವುದು ಅನಿವಾರ್‍ಯವಾಗಿದ್ದು ಎಸಿಬಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.