ಸಾಗರ : ನೀವು ಕೇಳಿದ ೫ ಲಕ್ಷ ತಂದಿದ್ದೇವೆ ಬನ್ನಿ... ಇನ್ನಾದರು ಖಾತಾ ಏರಿಸಿ ನಿವೇಶನ ಬಿಡುಗಡೆ ಮಾಡಿ... ಇವು ಸಾಗರ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿಯ ಪಿಡಿಒ ರಮ್ಯ ವಿರುದ್ಧ ನೊಂದ ದಂಪತಿ ಹಿಡಿದಿದ್ದ ಪ್ರತಿಭಟನಾ ಫಲಕದ ಸಾಲುಗಳು.
ಈ ದಂಪತಿ, ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೈಟ್ ಒಂದನ್ನ ಖರೀದಿಸಿದ್ದರು. ಈ ಸೈಟ್ ಕೊಳ್ಳಲು ನಿಮಗೆ ಇಷ್ಟು ಹಣ ಎಲ್ಲಿಂದ ಬಂತೆಂದು ಪ್ರಶ್ನಿಸಿದ ಪಿಡಿಒ, ಈ ದಂಪತಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಪಿಡಿಒ ನಮಗೆ ೫ ಲಕ್ಷ ಲಂಚ ಕೊಡುವಂತೆ ಬೇಡಿಕೆಯನ್ನಿಟ್ಟಿದ್ದರು ಎಂದು ದಂಪತಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಗರ ತಾಲೂಕು ಪಂಚಾಯಿತಿಯ ಎದುರು ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟನೆ ಮಾಡಿದರು.