ಹೊಸನಗರ : ಬೈಂದೂರು ಮತ್ತು ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಬಿಎನ್ ತಡೆಗೋಡೆ ನಿರ್ಮಾಣದಲ್ಲಿ ಭಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಹೊಸನಗರ ತಾಲೂಕಿನ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗೋಡಿ ಗ್ರಾಮದಲ್ಲಿ ನಿರ್ಮಿಸಿರುವ ಜಿಬಿಎನ್ ತಡೆಗೋಡೆ ಕುಸಿದಿದೆ. ೪.೮ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಆಗಲೇ ಕುಸಿದು ಬಿದ್ದಿದೆ. ಕಳಪೆ ಕಾಮಗಾರಿ ನಡೆಸಿ, ಭಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅಲ್ಲದೆ ಬೇರೆ ಪ್ರದೇಶದ ಕಾಮಗಾರಿಯ ಮಣ್ಣು, ಕಲ್ಲು ತಂದು ಹಾಕಿ ಇಲ್ಲಿ ಕಾಮಗಾರಿ ನಡೆಸಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ ಬೇಳೂರು, ಆರ್. ಎಂ. ಮಂಜುನಾಥಗೌಡ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆ ಕೂಡ ನಡೆಸಿದ್ರು.
ಇದು ೪೦ ಪರ್ಸೆಂಟ್ ಸರಕಾರ ಅಲ್ಲ, ೬೦ ಪರ್ಸೆಂಟ್ ಸರಕಾರ. ಯಾವ ಯಾವ ಇಂನಿಯರ್, ಅಧಿಕಾರಿಗಳು ಶಾಮೀಲಾಗಿದ್ದಾರೆ ಅವರು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉಭಯ ನಾಯಕರು ಒತ್ತಾಯಿಸಿದ್ರು. ಕೊಲ್ಲೂರು ಮುಖಾಂಬಿಕೆಯ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಹೀಗೆ ಆದ್ರೆ ಹೇಗೆ.. ಯಾರ್‍ಯಾರು ಭ್ರಷ್ಟಾಚಾರ ನಡೆಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಂಡು ಮತ್ತೊಮ್ಮೆ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಿದರು.