ನಮ್ಮನ್ನೆ ನೇಮಕ ಮಾಡಿಕೊಳ್ಳಿ 

ಶಿವಮೊಗ್ಗ : ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳಿವೆ. ಅವುಗಳಿಗೆ ಕೋವಿಡ್ ೧೯ ಸಂದರ್ಭದಲ್ಲಿ ಕರೋನ ವಾರಿಯರ್‍ಸ್‌ಗಳಾಗಿ ಕೆಲಸ ಮಾಡಿದ್ದವರನ್ನು ನೇಮಕಮಾಡಿಕೊಳ್ಳಬೇಕೆಂದು ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.

ಕರೋನ ಕಾಲದಲ್ಲಿ ಹಗಲು ರಾತ್ರಿಯೆನ್ನದೆ ನಾವು ಮಹಾಮಾರಿ ವಿರುದ್ಧ ಹೋರಾಡಿದ್ದೇವೆ. ಜೀವದ ಹಂಗು ತೊರೆದು, ಮನೆ ಮಂದಿಯನ್ನೆಲ್ಲ ದೂರದಲ್ಲಿಟ್ಟು ಕೆಸಲ ಮಾಡಿದ್ದೇವೆ. ಈ ರೀತಿ ೬೪೬೩ ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದೇವೆ. ಆದ್ದರಿಂದ ಇಲಾಖೆಯಲ್ಲಿರುವ ಖಾಲೆ ಹುದ್ದೆಗಳಿಗೆ ನಮ್ಮನ್ನೆ ನೇಮಕ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.