ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯ ಗ್ರಂಥಾಲಯದ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರೋನ ಪಾಸಿಟಿವ್ ಬಂದಿದೆ. ಶುಕ್ರವಾರ ಗ್ರಂಥಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರೋನ ಪರೀಕ್ಷೆ ನಡೆಸಲಾಗಿತ್ತು.
ಈ ವೇಳೆ ನಾಲ್ಕು ಜನರಿಗೆ ಕರೋನ ಪಾಸಿಟೀವ್ ಬಂದಿದೆ. ಹೀಗಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿದವರು ಹಾಗೂ ಕರೋನ ಪಾಸಿಟೀವ್ ಬಂದವರ ಸಂಪರ್ಕಕ್ಕೆ ಒಳಪಟ್ಟವರು ಕರೋನ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಕುವೆಂಪು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.