ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕೇತರ ನೌಕರರು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವನ್ನು ತೊರೆದು ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಮೂಲಕ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ.
ಬಡ್ತಿ ನೀಡಿರುವ ಅಧ್ಯಾಪಕೇತರ ನೌಕರರ ವೇತನ ನಿಗದೀಕರಣಗೊಳಿಸುಬೇಕು ಬಡ್ತಿ ಹಾಗೂ ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳಿಗೆ ಬಡ್ತಿ ಹಾಗೂ ಸ್ವತಂತ್ರ್ಯ ಪ್ರಭಾರ ನೀಡುವಂತೆ ಒತ್ತಾಯಿಸಿ ಮುಷ್ಕರ ನಡೆಯುತ್ತಿದೆ.
ಕುವೆಂಪು ವಿವಿ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘವು ಕುವೆಂಪು ವಿವಿ ಉಪಕುಲಸಚಿವರ ಹುದ್ದೆಗೆ ಸಂದರ್ಶನ ನಡೆಸಿ ಬಡ್ತಿ ನೀಡುವಂತೆ ಒತ್ತಾಯಿಸಿದೆ. ಬೇಡಿಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಆಗಸ್ಟ ೧ ರಂದು ತಾತ್ಕಲಿಕವಾಗಿ ಮುಷ್ಕರವನ್ನು ಸ್ಥಗಿತಗೊಳಿಸಿತ್ತು. ಆದರೆ ವಿಳಂಬ ಧೋರಣೆ ಅನುಸರಿಸಿದ ಕಾರಣ ಪ್ರತಿಭಟನೆ ಮುಂದುವರೆದಿದ್ದು ಐದನೇ ದಿನಕ್ಕೆ ಕಾಲಿಟ್ಟಿದೆ.