ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ 

ಶಿವಮೊಗ್ಗ : ಪೆಟ್ರೋಲ್ ಲೀಟರ್‌ಗೆ 113 ರೂಪಾಯಿ, ಅಡುಗೆ ಅನಿಲ 980 ರೂಪಾಯಿ, ಅಡುಗೆ ಎಣ್ಣೆ ಲೀಟರ್‌ಗೆ 190 ರೂಪಾಯಿ. ಪರಿಸ್ಥಿತಿ ಹೀಗೆ ಆದ್ರೆ ಬಡ ಮತ್ತು ಮಧ್ಯವರ್ಗದವರು ಬದುಕೋದು ಹೇಗೆ.. ಕೂಲಿ ನಾಲಿ ಮಾಡೋರು ಬದುಕೋಕೆ ಸಾಧ್ಯನಾ..? ಖಂಡಿತಾ ಇಲ್ಲ. ಅಗತ್ಯವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ಆ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮ ನಡೆಯನ್ನು ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸ್ತಾಯಿದೆ. ಶಿವಮೊಗ್ಗದಲ್ಲಿಯೂ ಕಾಂಗ್ರೆಸ್ ಸರಣಿ ಪ್ರತಿಭಟನೆಗೆ ಮುಂದಾಗಿದ್ದು, ಶಿವಮೊಗ್ಗ ನಗರ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯ್ತು. ನಡು ರಸ್ತೆಯಲ್ಲಿಯೇ ಒಲೆ ಹಚ್ಚಿ, ಚಿತ್ರನ್ನ ಮಾಡಿ, ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕುವ ಮೂಲಕ ಪೋಲಿಸ್ ಚೌಕಿಯಲ್ಲಿ ಪ್ರತಿಭಟಿಸಿದ್ರು. ಬಿಜೆಪಿ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.