ಈಶ್ವರಪ್ಪ ವಜಾಗೆ ಕಾಂಗ್ರೆಸ್ ಆಗ್ರಹ 

ಶಿವಮೊಗ್ಗ : ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನೆಲ್ಲೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ರಾಜ್ಯದ್ಯಾಂತ ಪ್ರತಿಭಟನೆಗಳು ಆರಂಭವಾಗಿದೆ. ಶಿವಮೊಗ್ಗದಲ್ಲಿಯೂ ಕಾಂಗ್ರೆಸ್ ಮುಖಂಡರು ಈಶ್ವರಪ್ಪ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ತನ್ನ ಕಾರ್ಯಕರ್ತರನ್ನು ಉಳಿಕೊಳ್ಳದ ಇವರು ದೇಶವನ್ನು ಹೇಗೆ ಉಳಿಸ್ತಾರೆ. ಇದು ಕೊಲೆಗಡುಕ, ಭ್ರಷ್ಟ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಪರ್ಸೆಂಟೇಜ್ ಸರ್ಕಾರ. ಸಂತೋಷ್ ಸಾವಿಗೆ ಕಾರಣವಾದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸರ್ಕಾರ ವಜಾ ಮಾಡಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.