ಶಿವಮೊಗ್ಗ : ರಾಜ್ಯದಲ್ಲಿ ಒಂದೆಡೆ ಪ್ರತಿದಿನವೂ ಒಂದಲ್ಲ ಒಂದು ಧಾರ್ಮಿಕ ಕಲಹಗಳು, ಅಭಿಯಾನಗಳು ಆರಂಭವಾಗುತ್ತಿವೆ. ಇನ್ನೊಂದೆಡೆ ಸಾಮಾನ್ಯ ಜನರು ಬೆಲೆ ಏರಿಕೆ ಬಿಸಿಗೆ ಬೆಂದು ಹೋಗುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್, ಅಡುಗೆ ಎಣ್ಣೆ ಹೀಗೆ ಅಗತ್ಯ ವಸ್ತಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಮಸಿ ಬಳಿಯಲಾಯ್ತು. ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು