ಪಕೋಡ, ಹೂವು-ಹಣ್ಣು ಮಾರಿದ ಪದವೀಧರರು!

ಶಿವಮೊಗ್ಗ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ೭ ವರ್ಷಗಳು ಕಳೆದಿದ್ದರೂ ಯುವಜನತೆಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಅವರ ಜನ್ಮದಿನದ ಪ್ರಯುಕ್ತ ಶಿವಮೊಗ್ಗ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ವತಿಯಿಂದ ರಾಷ್ಟಿçÃಯ ನಿರುದ್ಯೋಗ ದಿವಸ್ ಆಚರಿಸಲಾಯಿತು.

ನಗರದ ಬೆಕ್ಕಿನಕ್ಲಮಠದ ಬಳಿ ಸೇರಿದ ಪಕ್ಷದ ಸದಸ್ಯರು, ಪದವೀಧರರ ವೇಷ ತೊಟ್ಟು ಟೀ, ಬೋಂಡಾ ಮಾರುವ ಮೂಲ ಪ್ರತಿಭಟನೆ ನಡೆಸಿದ್ರು. ನರೇಂದ್ರಮೋದಿಯವರು ೨೦೧೪ರಲ್ಲಿ ಪ್ರಧಾನಿಯಾಗುವ ವೇಳೆ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ೨ ಕೋಟಿ ಉದ್ಯೋಗ ಸೃಷ್ಟಿಸುವುದಕ್ಕಿಂತ ಕೋಟ್ಯಂತರ ನಿರುದ್ಯೋಗಿಗಳನ್ನು ಸೃಷ್ಟಿಸಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿದ್ರು.

ಈ ಸಂದರ್ಭದಲ್ಲಿ ಸೂಡಾ ಮಾಜಿ ಅಧ್ಯಕ್ಷರಾದ ಎನ್.ರಮೇಶ್, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ಅಲ್ಪಸಂಖ್ಯಾತ ಕಾಂಗ್ರೆಸ್ ನ ಅಧ್ಯಕ್ಷರಾದ ಮೊಹಮ್ಮದ್ ನಿಯಾಲ್ ಮತ್ತು ನೂರಾರು ನಿರುದ್ಯೋಗಿ ಯುವಕರು ಪಾಲ್ಗೊಂಡಿದ್ದರು.

ಅಲ್ಲದೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದಲೂ ನಿರುದ್ಯೋಗ ದಿನ ಆಚರಣೆ ಮಾಡಲಾಯಿತು. ಪದವೀಧರರ ವೇಷಭೂಷಣ ತೊಟ್ಟ ಕಾರ್ಯಕರ್ತರು ನಗರದ ಬಸ್ ನಿಲ್ದಾಣದ ಎದುರು ಪಕೋಡಾ, ಹೂವು, ಹಣ್ಣು ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.

ಈ ವೇಳೆ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಪಾಲಿಕೆ ಪ್ರತಿಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯ ಹೆಚ್.ಸಿ.ಯೋಗೇಶ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.