ಕೇಶವಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಶಾಸಕ ಹಾಗೂ ಮಾಜಿ ಎಂಎಲ್‌ಸಿ

ಶಿವಮೊಗ್ಗ : ಇಲ್ಲಿನ ಹೊಸಳ್ಳಿಯ ಕೇಶವಮೂರ್ತಿ ಅವರಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ, ಕೆ.ಬಿ.ಪ್ರಸನ್ನ ಕುಮಾರ್ ಹಾಗೂ ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್ ಕೇಶವಮೂರ್ತಿಯವರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ವೇಳೆ ಕೇಶವಮೂರ್ತಿಯವರು ಗಮಕವೊಂದನ್ನ ಹಾಡುವ ಮೂಲಕ ಅಲ್ಲಿದ್ದವರ ಮನಸೋರೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಗಮಕ ಕಲೆಗೆ ಕೇಶವಮೂರ್ತಿಯವರ ೭೫ ವರ್ಷಗಳ ಸೇವೆಗೆ ಈ ಗೌರವ ಲಭಿಸಿದೆ. ಇದು ನಮ್ಮೆಲ್ಲರಿಗೂ ಬಹಳ ಸಂತೋಷದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.