ಶಿವಮೊಗ್ಗ : ಶಿವಮೊಗ್ಗ ಸ್ನೇಹ ಬಳಗದ ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ "ಗಾಂಧಿ ಕಥನ" ಕೃತಿಯ ಲೇಖಕ ಡಿ.ಎಸ್.ನಾಗಭೂಷಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಶಿವಮೊಗ್ಗದ ಡಿಸಿ ಕಚೇರಿ ಹಿಂಭಾಗದಲ್ಲಿರುವ ಪತ್ರಿಕಾ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಧ್ಯಾಪಕ ಎಂ.ಚಂದ್ರಶೇಖರಯ್ಯ ಅವರು ಅಭಿನಂದನಾ ನುಡಿಗಳನ್ನಾಡಿದರು. ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಮೇಟಿ ಮಲ್ಲಿಕಾರ್ಜುನ ಅವರು ಗಾಂಧಿ ಕಥನ ಕೃತಿ ಕುರಿತು ಮಾತನಾಡಿದರು. ಕವಿ ಪ್ರೊ. ಸತ್ಯನಾರಾಯಣ ಅಣತಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಸಂಸ್ಕೃತಿ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅವರು ಡಿ.ಎಸ್.ನಾಗಭೂಷಣ ಅವರ "ವಿಧ ವಿಧ" ಕೃತಿಯನ್ನ ಬಿಡುಗಡೆಗೊಳಸಿ ಮಾತನಾಡಿದರು.