ಶಾಸಕರ ಸ್ವಚ್ಛತಾ ಅಭಿಯಾನ 

ಸಾಗರ : ಶಾಸಕ ಹರತಾಳು ಹಾಲಪ್ಪ ನಡೆಸುತ್ತಿರುವ ಸ್ವಚ್ಛತಾ ಅಭಿಯಾನ ಆರನೇ ದಿನಕ್ಕೆ ಕಾಲಿಟ್ಟಿದೆ. ಸಾಗರದ ಐದನೇ ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಬಳಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಶಾಸಕರು ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಅವರು, ವರ್ಷವಿಡೀ ಪ್ರತಿದಿನ ಈ ರೀತಿ ಸ್ವಚ್ಛತಾ ಕಾರ್ಯವನ್ನ ಮಾಡಬೇಕೆಂದು ಅಂದು ಕೊಂಡಿದ್ದೇವೆ. ಪ್ರತಿದಿನ ನಗರ ಸಭೆಯವರು ನಗರವನ್ನ ಸ್ವಚ್ಛ ಮಾಡುತ್ತಾರೆ. ಆದ್ರೆ ಈ ಕಾರ್ಯದಲ್ಲಿ ಸಾರ್ವಜನಿಕರು ಸಹ ಭಾಗಿಯಾಗಬೇಕು. ಹಾಗೂ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಕಸದ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಈ  ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.