ಶಿವಮೊಗ್ಗ : ಗೌರಿಗದ್ದೆ ಮಹಾತ್ಮ ಗಾಂಧಿ ಟ್ರಸ್ಟ್, ಶಿವಮೊಗ್ಗದ ಸರ್ಜಿ ಫೌಂಡೇಷನ್, ಪರೋಪಕಾರಂ ಹಾಗೂ ರೌಂಡ್ ಟೇಬಲ್ ಇಂಡಿಯಾ ೧೬೬ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತ ಕಾರ್ಯ ಮಾಡಲಾಗಿದೆ. ಸ್ವಚ್ಛಭಾರತ-ಶ್ರೇಷ್ಠ ಭಾರತ ಘೋಷವಾಕ್ಯದೊಂದಿಗೆ ಸಕ್ರೆಬೈಲು ಆನೆ ಬಿಡಾರದಿಂದ ಸಕ್ರೆಬೈಲುವಿನಿಂದ ಮಂಡಗದ್ದೆ ಮಾರ್ಗವಾಗಿ ೬ ಕಿಲೋ ಮೀಟರ್ ದೂರ ಸ್ವಚ್ಛತಾ ಆಂದೋಲನ ನಡೆಸಲಾಗಿದೆ.
ಗೌರಿಗದ್ದೆ ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಈ ಸ್ವಚ್ಛತಾ ಕಾರ್ಯ ನಡೆಯಿತು. ರಸ್ತೆ ಬದಿ ನಿಂತು ಮದ್ಯಪಾನ ಮಾಡುವವರಿಂದ ಈ ಭಾಗದಲ್ಲಿ ಪರಿಸರ ಕಲುಶಿತವಾಗಿದ್ದು, ಸ್ವಚ್ಛತಾ ಕಾರ್ಯದಲ್ಲಿ ಯಥೇಚ್ಚವಾಗಿ ಸಿಕ್ಕಿರುವ ಮದ್ಯದ ಬಾಟಲಿಗಳು ಇದಕ್ಕೆ ಸಾಕ್ಷಿಯಂತಿವೆ.
ಈ ಆಂದೋಲನದಲ್ಲಿ ಸರ್ಜಿ ಪೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಧನಂಜಯ್ ಸರ್ಜಿ, ಎಡಿಸಿ ನಾಗೇಂದ್ರ ಹೊನ್ನಳಿ, ಪಾಲಿಕೆ ಸದಸ್ಯ ವಿಶ್ವಾಸ್, ಕಾಂಗ್ರೆಸ್ ಯುವ ಮುಖಂಡ ರಂಗನಾಥ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಬಳ್ಳೆಕೆರೆ ಸಂತೋಷ್ ಹಾಗೂ ಮತ್ತಿತರ ಪ್ರಮುಖರು ಸೇರಿದಂತೆ ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು. ಬರೋಬ್ಬರಿ ಮೂರು ಲೋಡ್ ಘನ ತ್ಯಾಜ್ಯ ಈ ಕ್ಲೀನ್ ಕಾರ್ಯದ ವೇಳೆ ಸಂಗ್ರಹಣೆ ಮಾಡಲಾಯ್ತು.