ಶಿವಮೊಗ್ಗ : ಹಿಜಾಬ್ ಸಂಘರ್ಷದಿಂದ ಉಂಟಾಗಿರುವ ಗದ್ದಲ, ಗೊಂದಲಗಳ ನಡುವೆಯೇ ಕಾಲೇಜುಗಳಲ್ಲಿ ತರಗತಿಗಳು ನಡೆದವು. ಬುಧವಾರದಿಂದ ಆರಂಭವಾಗಿರುವ ಕಾಲೇಜುಗಳಿಗೆ ಗುರುವಾರವೂ ವಿದ್ಯಾರ್ಥಿಗಳು ಎಂದಿನಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಗೆ ತೆರಳಿದ್ದಾರೆ.
ಕೋರ್ಟ್ ಮಧ್ಯಂತರ ಆದೇಶದಂತೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಸಂಕೇತಗಳನ್ನ ಧರಿಸದೇ ಕಾಲೇಜಿಗೆ ತೆರಳಿದ್ದಾರೆ. ಆದರೆ ಕೆಲವು ಕಡೆ ಮಾತ್ರ ವಿದ್ಯಾರ್ಥಿನಿಯರು ನಾವು ಕಾಲೇಜಿಗೆ ಹಿಜಾಬ್ ಹಾಕಿಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದರು. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಖಾಕಿ ಕಣ್ಗಾವಲಲ್ಲಿ ತರಗತಿಗಳು ನಡೆದಿವೆ.