ಪೌರ ಕಾರ್ಮಿಕರ ಮುಷ್ಕರ ಅಂತ್ಯ

ಶಿವಮೊಗ್ಗ : ಖಾಯಮಾತಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ನಡೆಸ್ತಾಯಿದೆ ಮುಷ್ಕರ ಕಡೆಗೂ ಅಂತ್ಯವಾಗಿದೆ. ನಾಲ್ಕು ದಿನದಿಂದ ರಾಜ್ಯಾದ್ಯಂತ ನಡೆಸ್ತಾಯಿದ್ದ ಮುಷ್ಕರಕ್ಕೆ ಬಗ್ಗಿದ ರಾಜ್ಯ ಸರ್ಕಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೀಟಿಂಗ್ ಮಾಡಿ ಕೆಲ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದೆ. 

ಖಾಯಮಾತಿಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲು ಸರ್ಕಾರ ತೀರ್ಮಾನಿಸಿದ್ದು ಮೂರು ತಿಂಗಳ ಒಳಗೆ ಸಮಿತಿಯು ವರದಿ ನೀಡುವಂತೆ ಸೂಚಿಸಲಾಗುವುದು. ಗುತ್ತಿಗೆ ಪದ್ಧತಿಗೆ ಹಂತ ಹಂತವಾಗಿ ನೇರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಪೌರ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ. ಗೃಹ ಭಾಗ್ಯ ಯೋಜನೆಗೆ ಮಂಜೂರಾತಿ. ಪೌರ ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಸೌಲಭ್ಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸಲು ಅಸ್ತು ಎಂದಿದೆ. ಸರ್ಕಾರದ ಭರವಸೆಗೆ ಒಪ್ಪಿರುವ ಪೌರ ಕಾರ್ಮಿಕರು ಕಡೆಗೂ ಮುಷ್ಕರವನ್ನು ಕೈ ಬಿಟ್ಟು ಕೆಲದಲ್ಲಿ ತೊಡಗಿಗೊಂಡಿದ್ದಾರೆ.