ಮಾತುಕತೆಗೆ ಮುಂದಾದ ಮೇಯರ್ : ಮುಷ್ಕರ ನಿಲ್ಲಿಸದ ಪೌರ ಕಾರ್ಮಿಕರು

ಶಿವಮೊಗ್ಗ : ನೇರಪಾವತಿ ಪೌರ ನೌಕರರ ಖಾಯಮಾತಿಗಾಗಿ ಆಗ್ರಹಿಸಿ ಕಾರ್ಮಿಕರು ನಡೆಸ್ತಾಯಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಪೌರಕಾರ್ಮಿಕರು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ಭವನದಿಂದ ಫ್ರೀಂಡಂ ಪಾರ್ಕ್‌ವರೆಗೆ ಅರೆ ಬೆತ್ತಲೆಯಾಗಿ ಪ್ರತಿಭಟನಾ ಮೆರಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಡೆಗೂ ಕಾರ್ಮಿಕರ ದನಿ ಕೇಳಿಸಿಕೊಂಡಿರುವ ಜನಪ್ರತಿನಿಧಿಗಳು ಮುಷ್ಕರ ನಡೆಯುತ್ತಿರುವ ಫ್ರೀಡಂ ಪಾರ್ಕ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಮಹಾನಗರ ಪಾಲಿಕೆ ಸದಾ ಕಾರ್ಮಿಕರ ಪರವಾಗಿ ಇರುತ್ತೆ. ನೀವು ಪುನಃ ಕೆಲಸಕ್ಕೆ ಬನ್ನಿ. ರಾಜ್ಯ ಸರ್ಕಾರವು ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂದು ಭರವಸೆ ನೀಡಿದರು. ಈ ವೇಳೆ ಪಾಲಿಕೆ ಉಪಮೇಯರ್ ಗನ್ನಿಶಂಕರ್, ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ ಸೇರಿದಂತೆ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

ಆದ್ರೆ ಇವರ ಭರವಸೆಗಳಿಗೆ ಒಪ್ಪದ ಕಾರ್ಮಿಕರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ.