ಹೈಲೆಟ್ಸ್:
ಕೋವಿಡ್ ಮುಂಜಾಗ್ರತ ಕ್ರಮ
ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನೆಯ ಪರಿಶೀಲನೆ
ಪರಿಶೀಲನೆ ನಡೆಸಿದ ಸೀಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ
ಶಿವಮೊಗ್ಗ:
ಕೋವಿಡ್ ಮತ್ತೆ ಯಾವಾಗ ವಕ್ಕರಿಸುತ್ತದೋ ಏನೊ... ಈಗಲೇ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ನ ಮುಂಜಾಗ್ರತ ಕ್ರಮವಾಗಿ ದೇಶಾದ್ಯಂತ ಮಾಸ್ ಡ್ರಿಲ್ ನಡೆಸಲಾಗುತ್ತಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಘಟಕವನ್ನು ಪರಿಶೀಲನೆ ನಡೆಸಲಾಯ್ತು. ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ಪರಿಶೀಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿ, ಕೋವಿಡ್ ಹೆಚ್ಚಾಗುವ ಸಂಭವವಿರುವುದರಿಂದ ಮುಂಜಾಗ್ರತ ಕ್ರಮವಾಗಿ ಐಸಿಸಿಯು ಬೆಡ್, ವಾರ್ಡ್‌ಗಳನ್ನು ತಯಾರು ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟ ಆಕ್ಸಿಜನ್ ಉತ್ಪಾದನೆ, ಸಿಲಿಂಡರ್, ವಿದ್ಯುತ್ ವ್ಯವಸ್ಥೆ ಎಲ್ಲವನ್ನು ಪರಿವೀಕ್ಷಣೆ ಮಾಡಲಾಗಿದೆ ಎಂದರು.