ಕೇಂದ್ರ ಬಜೆಟ್ - ಯಾವುದು ಅಗ್ಗ? ಯಾವುದು ದುಬಾರಿ? 

ದೆಹಲಿ : ಏಪ್ರಿಲ್ 1, 2022ರಿಂದ ಪ್ರಾರಂಭ ಆಗುವ ಹಣಕಾಸು ವರ್ಷದ ಕೇಂದ್ರ ಬಜೆಟ್‌ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿದಂತೆ, ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು ಅಗ್ಗವಾಗಲಿವೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ರತ್ನದ ಕಲ್ಲುಗಳ ಮೇಲಿನ ಸೀಮಾ ಸುಂಕವನ್ನು ಶೇಕಡಾ 5ಕ್ಕೆ ಇಳಿಸಲಾಗಿದೆ. ಆ ನಂತರದಲ್ಲಿ 350ಕ್ಕೂ ಹೆಚ್ಚು ಸೀಮಾ ಸುಂಕ ವಿನಾಯಿತಿಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದಲ್ಲಿ ಉತ್ಪಾದನೆ ಆಗುವ ಕೃಷಿ ವಲಯಕ್ಕೆ ಸಂಬಂಧಿಸಿದ ಉಪಕರಣಗಳ ಮೇಲಿನ ವಿನಾಯಿತಿಯ ವಿಸ್ತರಣೆಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. 

ಹಾಗೆದ್ರೆ ಈ ಬಾರಿಯ ಬಜೆಟ್‌ನಿಂದಾಗಿ ಏನೇನು ಅಗ್ಗವಾಗಲಿದೆ?

ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು, ಆಭರಣ ವಸ್ತುಗಳು, ಕೈಗಡಿಯಾರಗಳು, ಚರ್ಮದ ವಸ್ತುಗಳು, ಕೃಷಿ ಉಪಕರಣಗಳು, ರತ್ನದ ಕಲ್ಲುಗಳು ಮತ್ತು ವಜ್ರಗಳು, ತದ್ರೂಪಿ ಅಥವಾ ಅನುಕರಣೆ ಆಭರಣ, ಮೊಬೈಲ್ ಫೋನ್‌ಗಳು, ಮೊಬೈಲ್ ಫೋನ್ ಚಾರ್ಜರ್‌ಗಳು, ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳು, ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕ, ಸ್ಟೀಲ್ ಸ್ಕ್ರ್ಯಾಪ್ ಸೇರಿದಂತೆ ಹಲವು ವಸ್ತಗಳ ಬೆಲೆ ಅಗ್ಗವಾಗಲಿದೆ.

ಯಾವುದು ದುಬಾರಿ?
ಎಲ್ಲ ಆಮದು ವಸ್ತುಗಳು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ, ಛತ್ರಿಗಳ ಮೇಲಿನ ಸುಂಕವನ್ನ ಹೆಚ್ಚಳ ಮಾಡಲಾಗಿದೆ.