ಶ್ರೀ ರಾಮ ನವಮಿ ಆಚರಣೆ 

ಶಿವಮೊಗ್ಗ : ಶ್ರೀರಾಮನ ಜಪ... ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ.. ಹೌದು, ಇದು ಶ್ರೀರಾಮ ನವಮಿ ಸಂಭ್ರಮ. ಭಾರತದಾದ್ಯಂತ ಆಚರಿಸ್ಪಡುವ ಸಂಭ್ರಮದ ಹಬ್ಬಗಳಲ್ಲಿ ಒಂದು. ಚೈತ್ರ ಮಾಸದ ಶುಕ್ಲ ಪಕ್ಷ ನವಮಿ ತಿಥಿಯಂದು ಶ್ರೀ ರಾಮ ಜಯಂತಿ ಉತ್ಸವವನ್ನು ಆಚರಿಸಲಾಗುತ್ತದೆ.

ಹಿಂದೂ ಧರ್ಮಶಾಸ್ತ್ರದಲ್ಲಿ ರಾಮ ನವಮಿಗೆ  ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ರಾಜಾ ಧಶರಥನ ಮನೆಯಲ್ಲಿ ಶ್ರೀರಾಮನ ಜನ್ಮವಾಯಿತು ಎನ್ನಲಾಗುತ್ತದೆ. ಈ ಹಿನ್ನೆಲೆ ಹಿಂದೂ ಧರ್ಮೀಯರು ಅತ್ಯಂತ ಉತ್ಸಾಹ ಮತ್ತು ವೈಭವದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಶಿವಮೊಗ್ಗದಲ್ಲಿಯೂ ಹಲವು ಕಡೆಗಳಲ್ಲಿ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಿಲಾಗುತ್ತಿದೆ. ಸಾರ್ವಜನಿಕರಿಗೆ ಪಾನಕ ಹಾಗೂ ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ.