ಮಡಿವಾಳ ಮಾಚಿದೇವ ಜಯಂತಿ ಆಚರಣೆ 

ಶಿವಮೊಗ್ಗ : ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಂದ ಮಡಿವಾಳ ಮಾಚಿದೇವರ ಜಯಂತಿಯನ್ನ ಆಚರಿಸಲಾಯಿತು. ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದವರೆಲ್ಲರೂ ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನ ಸಲ್ಲಿಸಿ ಗೌರವ ಸೂಚಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಮಡಿವಾಳರು ಅವರ ರಕ್ತವನ್ನ ಬೆವರು ರೂಪದಲ್ಲಿ ಸುರಿಸಿ, ಬಟ್ಟೆಯನ್ನ ಶುದ್ಧ ಮಾಡದೇ ಇದ್ದರೆ, ಯಾವುದೇ ವರ್ಗದ ಗೌರವ ಉಳಿಯಲ್ಲ. ಈ ರೀತಿಯಾಗಿ ಮಡಿವಾಳ ಸಮಾವು ಎಲ್ಲಾ ಸಮಾಜಕ್ಕೂ ಗೌರವ ತಂದುಕೊಡುತ್ತಿದೆ ಎಂದು ಹೇಳಿದರು.