ಸಂತ ಸೇವಾಲಾಲ್ ಜಯಂತಿ ಆಚರಣೆ

ಶಿವಮೊಗ್ಗ : ಸಂತ ಸೇವಾಲಾಲರು ಶೋಷಿತ ಸಮಾಜವಾದ ಬಂಜಾರ ಸಮುದಾಯದ ಏಳಿಗೆಗಾಗಿ ದುಡಿದ ಮಹಾನ್ ವ್ಯಕ್ತಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಸಂತ ಶ್ರೀ ಸೇವಾಲಾಲ್ ಅವರ 283ನೇ ಜಯಂತಿ ಏರ್ಪಡಿಸಲಾಗಿತ್ತು.

ಈ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಂಸದರು, ಬಂಜಾರ ಸಮುದಾಯದವರಿಗೆ ಸರಿಯಾದ ಮಾರ್ಗದರ್ಶನ ಇಲ್ಲದ ಸಮಯದಲ್ಲಿ ಸಮುದಾಯಕ್ಕೆ ದಾರಿ ತೋರಿಸುವ ಕಾರ್ಯವನ್ನ ಸಂತ ಸೇವಾಲಾಲರು ಮಾಡಿದರು. ಬಂಜಾರ ಸಮುದಾಯ ಮಾತ್ರವಲ್ಲದೆ ಎಲ್ಲ ಶೋಷಿತ ಸಮಾಜಗಳ ಅಂಕು-ಡೊಂಕುಗಳನ್ನ ತಿದ್ದಲು ತಪಸ್ಸಿನ ರೀತಿ ಸೇವಾಲಾಲರು ಕೆಲಸ ಮಾಡಿದ್ದರು. ಈ ಮೂಲಕ ಸಮಾಜವನ್ನ ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸೈನಾ ಮಹಾರಾಜ್, ಸಮಾಜದ ಮುಖಂಡರಾದ ಆಯನೂರು ಶಿವನಾಯ್ಕ್, ಕುಮಾರ ನಾಯ್ಕ್, ಭೊಜನಾಯ್ಕ್, ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ್, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಮತ್ತಿತರರು ಭಾಗಿಯಾಗಿದ್ದರು.