ಹೊನ್ನಾಳಿಗೂ ಬಂತ ಕ್ಯಾಸನೂರು ಕಾಯಿಲೆ? 

ಶಿವಮೊಗ್ಗ : ಆಯನೂರ ಉರ್ದು ಶಾಲೆಯ ಶಿಕ್ಷಕ ರಾಘವೇಂದ್ರ  ಎಂಬುವವರಿಗೆ ಮಂಗನಕಾಯಿಲೆ ಧೃಢಪಟ್ಟಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಹೊನ್ನಾಳಿ ತಾಲೂಕಿನವರು. ಆರಂಭದಲ್ಲಿ ಜ್ವರ ಕಾಣಿಸಿಕೊಂಡಿದ್ದು, ಹೊನ್ನಾಳಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಆದ್ರೆ ಎಂಟು ದಿನಗಳಾದರು ಜ್ವರ ಕಡಿಮೆಯಾಗಿರಲಿಲ್ಲ. ಮೊದಲಿಗೆ ಮೆದುಳು ಜ್ವರ ಇರಬಹುದೆಂದು ವೈದ್ಯರು ಶಂಕಿಸಿದ್ದರು. ಯಾಕೆಂದ್ರೆ ಇದುವರೆಗೂ ಹೊನ್ನಾಳಿ ತಾಲೂಕಿನಲ್ಲಿ ಯಾವುದೇ ಕೆಎಫ್‌ಡಿ ಪ್ರಕರಣಗಳು ಪತ್ತೆಯಾಗಿರಲಿಲ್ಲ.

ನಂತರ ಇವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಯೂ ಜ್ವರ ಕಡಿಮೆಯಾಗಿರಲಿಲ್ಲ. ಈ ಮಧ್ಯೆ ಇವರ ರಕ್ತವನ್ನ ಪರೀಕ್ಷೆಗೆ ಒಳಪಡಿಸಿದಾಗ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಈ ವೇಳೆಗಾಗಲೆ ಬಹಳ ದಿನಗಳು ಕಳೆದಿದ್ದರಿಂದಾಗಿ ರಾಘವೇಂದ್ರ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.