ಹೈಲೆಟ್ಸ್:
೧೫೦ಕ್ಕೂ ಹೆಚ್ಚು ಸಿಬ್ಬಂದಿ ಬಡ್ತಿ ರದ್ದು
ಸರಕಾರದ ಅನುಮತಿ ಪಡೆಯದೇ ಪದೋನ್ನತಿ
ಹೆಚ್ಚುವರಿ ವೇತನ ಕಡಿತಕ್ಕೂ ಕ್ರಮ
ಶಿವಮೊಗ್ಗ:
ಕುವೆಂಪು ವಿಶ್ವವಿದ್ಯಾಲಯದ ೧೫೦ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿಯ ಬಡ್ತಿಯನ್ನು ರದ್ದು ಮಾಡಲಾಗಿದೆ. ಸರಕಾರದ ಸೂಚನೆಯಂತೆ ಬಡ್ತಿ ರದ್ದತಿ ಆದೇಶವನ್ನು ಕುಲಸಚಿವೆ ಜಿ. ಅನುರಾದ ಹೊರಡಿಸಿದ್ದಾರೆ. ಬಡ್ತಿಯ ನಂತರ ಪಾವತಿಸಲಾದ ಹಣವನ್ನು ಸಿಬ್ಬಂದಿಯ ಮಾಸಿಕ ವೇತನದಲ್ಲಿ ಕಡಿತಗೊಳಿಸಲು ಸೂಚನೆ ನೀಡಲಾಗಿದೆ. ವಿವಿಯಲ್ಲಿ ಕೆಲಸ ಮಾಡುತ್ತಿರುವ ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಹಿರಿಯ ಸಹಾಯಕರು, ಕಿರಿಯ ಎಂಜಿನಿಯರ್, ಅಧೀಕ್ಷಕರು ಸೇರಿ ೧೫೦ಕ್ಕೂ ಹೆಚ್ಚು ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು. ಸರಕಾರದ ಅನುಮೋದನೆ ನೀಡದೇ ಇರೋದ್ರಿಂದ ಬಡ್ತಿ ರದ್ದು ಪಡಿಸಲಾಗಿದ್ದು, ಅನುಮತಿ ಪಡೆದ ನಂತರ ಪುನರ್ ಆದೇಶ ಹೊರಡಿಸುವ ಸಾಧ್ಯತೆಗಳು ಇವೆ.