ಪುನೀತ್ ಸ್ಮರಣಾರ್ಥ ಮಲೆನಾಡು ಉತ್ಸವದಲ್ಲಿ ಕೇಕ್ ಶೋ

ಶಿವಮೊಗ್ಗ :  ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹತ್ತಿರ ನಡೆಯುತ್ತಿರುವ ಮಲೆನಾಡು ಉತ್ಸವದಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಕೇಕ್ ಶೋ ಏರ್ಪಡಿಸಲಾಗಿದೆ.

ಪುನೀತ್ ಅವರ ವಿವಿಧ ಭಾವಚಿತ್ರಗಳನ್ನು ಚಿತ್ರಿಸಿ ಹಲವು ಕೇಕ್‌ಗಳನ್ನ ತಯಾರಿಸಲಾಗಿದೆ. ಹಾಗೆಯೇ ಕೇಕ್‌ನಲ್ಲಿಯೇ ಅಪ್ಪುವಿನ ಪುತ್ಥಳಿಯನ್ನ ಕೂಡ ತಯಾರು ಮಾಡಲಾಗಿದೆ. ಇದೀಗ ಈ ಕೇಕ್ ಪ್ರದರ್ಶನ ಎಲ್ಲರನ್ನೂ ಆಕರ್ಷಿಸುತ್ತಿದೆ.