ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಪುನೀತ್ ರಾಜ್‌ಕುಮಾರ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು, ಪುನೀತ್ ಅವರದು ನಂಬಲಾಗದ ಸಾವು. ಹೆಚ್ಚು ಪ್ರತಿಭೆ ಹಾಗೂ ವೈಚಾರಿಕವಾಗಿ ಬಹಳಷ್ಟು ಮುಂದಿರುವ ಸಾಧಕರಿಗೆ ಆಯಸ್ಸು ಕಡಿಮೆಯಿರುತ್ತೆ ಎಂದು ಅನಿಸ್ತಾಯಿದೆ. ಪುನೀತ್ ಅವರ ಅಂತಿಮ ಸಂಸ್ಕಾರವನ್ನ ಶಾಂತಿಯುತವಾಗಿ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅಲ್ಲದೆ ಪದ್ಮಶ್ರಿ ಪ್ರಶಸ್ತಿಗೆ ಪುನೀತ್ ಹೆಸರನ್ನ ಸರ್ಕಾರದಿಂದ ಶಿಫಾರಸು ಮಾಡುವುದಾಗಿ ಹೇಳಿದರು. ಈ ವೇಳೆ ಪುನೀತ್ ರಾಜ್‌ಕುಮಾರ್ ಜೊತೆ ಕಳದ ಕೆಲವು ಕ್ಷಣಗಳನ್ನ ನೆನಪು ಮಾಡಿಕೊಂಡರು.