ಬೆಂಗಳೂರು : ಈ ಬಾರಿಯ ಬಜೆಟ್ ಜನರ ನಿರೀಕ್ಷೆಗೆ ವಿರುದ್ಧವಾಗಿದೆ. ಹೊಸ ಸರ್ಕಾರ ಬಂದಾಗ, ಹೊಸ ಮುಖ್ಯಮಂತ್ರಿಯಾದಾಗ ನೀಡುವ ಆಶ್ವಾಸನೆಗಳ ಪಟ್ಟಿಯಂತಿದೆ. ಬಜೆಟ್‌ನಲ್ಲಿ ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳಿಲ್ಲ ಎಂದು ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸದ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯ ಬಜೆಟ್‌ನಲ್ಲಿ ಯಾವುದೇ ಮುನ್ನೋಟವಿಲ್ಲ. ಇದೊಂದು ನಿರಾಷದಾಯಕ ಬಜೆಟ್. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ಎರಡು ವರ್ಷಗಳಿಂದ ಕರೋನದಿಂದಾಗಿ ಆರ್ಥಿಕ ಬೆಳವಣೆಗೆ ಕಡೆಮೆಯಾಗಿದೆ. ಹೀಗಾಗಿ ಸಾಲ ಮಾಡಬೇಕಾಗಿದೆ ಎಂದು ಬಜೆಟ್‌ನಲ್ಲಿ ಹೇಳಿ ಕೊಂಡಿದ್ದಾರೆ ಎಂದು ಸಿದ್ದರಾಯಮಯ್ಯ ಆರೋಪಿಸಿದರು.