ರೈತಸಂಘ, ಹಸಿರು ಸೇನೆಯಿಂದ ರಕ್ತದಾನ ಶಿಬಿರ

ಶಿವಮೊಗ್ಗ : ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ಅವರ ೨೯ನೇ ನೆನಪಿನ ಸಭೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರೋಟರಿ ರಕ್ತನಿಧಿಯಲ್ಲಿ ನಡೆದ ಈ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರೈತಸಂಘದ ಸ್ಥಾಪಕರಾದ ಎನ್.ಡಿ.ಸುಂದರೇಶ್ ನಮ್ಮನಗಲಿ 29 ವರ್ಷವಾಗಿದೆ. ಕಳೆದ ಬಾರಿ ಕೋವಿಡ್ ಇದ್ದ ಕಾರಣ ದೊಡ್ಡ ಮಟ್ಟದಲ್ಲಿ ಸಭೆಗಳನ್ನ ಮಾಡಲು ಆಗಿರಲಿಲ್ಲಿ. ಹಾಗಾಗಿ ಸಂಘದ ಕಚೇರಿಯಲ್ಲಿಯೇ ರಕ್ತದಾನ ಶಿಬಿರ ಮಾಡಲಾಗಿತ್ತು. 17 ಜನ ರಕ್ತದಾನ ಮಾಡಿದ್ದರು. ಅದರಂತಯೇ ಈ ಬಾರಿಯೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸುಮಾರು 30 ಜನ ರಕ್ತದಾನ ಮಾಡಲಿದ್ದಾರೆ ಎಂದು ಹೇಳಿದರು.