ಎಬಿವಿಪಿ ವತಿಯಂದ ರಕ್ತದಾನ ಶಿಬಿರ

ಶಿವಮೊಗ್ಗ : ಸುಭಾಷ್ ಚಂದ್ರ ಬೋಸರ 125ನೇ ಜನ್ಮದಿನಾಚರಣೆಯ ಅಂಗವಾಗಿ ಎಬಿವಿಪಿ ಕಾರ್ಯಾಲಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.

ಎಬಿವಿಪಿ ಶಿವಮೊಗ್ಗ ಹಾಗೂ ರೋಟರಿ ರಕ್ತನಿಧಿ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಈ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡಿದರು. ಸುಮಾರು 30 ಜನ ರಕ್ತದಾನ ಮಾಡಿದರು.