ಶಿವಮೊಗ್ಗ : ಎನ್‌ಯು ಆಸ್ಪತ್ರೆಯು ಜೇಡಿಕಟ್ಟೆಯ ಮಾಚೇನಹಳ್ಳಿಯಲ್ಲಿರುವ ಆವರಣದಲ್ಲಿ ಜನವರಿ ೧೭ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡಿದೆ.
ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಎನ್‌ಯು ಆಸ್ಪತ್ರೆಯು ಮಾಚೇನಹಳ್ಳಿ ಕೈಗಾರಿಕ ಸಂಘಟನೆ, ರೆಡ್‌ಕ್ರಾಸ್ ಸಂಜೀವಿನಿ ಬ್ಲೆಡ್‌ಬ್ಯಾಂಕ್ ಹಾಗೂ ರೋಟರಿ ಬ್ಲಡ್ ಸೆಂಟರ್‌ನ ಜಂಟಿ ಸಹಯೋಗದಲ್ಲಿ ಈ ರಕ್ತದಾನ ಶಿಬಿರ ಆಯೋಜನೆ ಮಾಡಿದೆ. ರಕ್ತದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.