೭೧ ವಾದ್ಯಗಳ ನಾದಸ್ವರದ ಮೂಲಕ ಪ್ರಧಾನಿಗೆ ಜನ್ಮದಿನದ ಶುಭಾಶಯ

ಶಿವಮೊಗ್ಗ: ಇಲ್ಲಿನ ಸವಿತಾ ಮಂಗಳವಾದ್ಯಗಾರರ ಸಂಘದ ವತಿಯಿಂದ ಏಳು ವರ್ಷ ಅತ್ಯುತ್ತಮ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ೭೧ ವಾದ್ಯಗಳ ಮೂಲಕ ನಾದಸ್ವರ ಹೊರಡಿಸುವ ಮೂಲಕ ಜನ್ಮದಿನದ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಸುನೀತಾ ಅಣ್ಣಪ್ಪ, ಉಪ ಮಹಾಪೌರರು, ಸದಸ್ಯರು, ಸೋಡಾ ಅಧ್ಯಕ್ಷರು, ವಿವಿಧ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.