ಹೈಲೆಟ್ಸ್:
ಎರಡು ತಿಂಗಳ ಹಿಂದೆ ನಡೆದ ಮಹಿಳಾ ಸಾವಿಗೆ ಬಿಗ್ ಟ್ವಿಸ್ಟ್
ಕಿಮ್ಮನೆ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾವಿತ್ರಿ
ಟೈಲ್ಸ್ ಕೆಲಸ ಮಾಡುತ್ತಿದ್ದ ಜೋಗಿದಂರ್‌ರಿಂದ ಕೊಲೆ
ಶಿವಮೊಗ್ಗ:
ಎರಡು ತಿಂಗಳ ಹಿಂದೆ ನಗರದ ಕಿಮ್ಮನೆ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸಾವಾಗಿದ್ದು, ಮಹಿಳೆ ಸಾವಿತ್ರಿ ಸಾವು ಕೊಲೆ ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಕಿಮ್ಮನೆ ರೆಸಾರ್ಟ್‌ನಲ್ಲಿ ಹೊಲೇಟ್ ಸಿಬ್ಬಂದಿಯಾಗಿದ್ದು, ಅಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಜೋಗಿದಂರ್ ಕೊಲೆ ಮಾಡಿರುವಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಇಬ್ಬರು ಕೂಡ ಪರಿಚಯಸ್ಥರಾಗಿದ್ದು ದೈಹಿಕ ಸಂಪರ್ಕವನ್ನು ಹೊಂದಿರುತ್ತಾರೆ. ಜೋಗಿಂದರ್‌ಗೆ ಸಾವಿತ್ರಿಗೆ ಹಣವನ್ನು ಕೊಡುತ್ತಿದ್ದನು. ನವೆಂಬರ್ ೧೩ ರಂದು ಸಹ ಇಬ್ಬರು ಭೇಟಿಯಾಗಿದ್ದರು. ಕೊನೆಗೆ ಸಾವಿತ್ರಿ ಹಣವನ್ನು ಕೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದ್ದು. ಈ ಸಂದರ್ಬದಲ್ಲಿ ಜೋಗಿಂದರ್ ಸಾವಿತ್ರಿಯನ್ನು ಕೊಲೆ ಮಾಡಿದ್ದಾನೆ. ಆರೋಪಿ ಜೋಗಿಂದರ್‌ನ್ನು ಪೊಲೀಸರು ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.