ಹರ್ಷ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ 

ಶಿವಮೊಗ್ಗ : ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆ ನಡೆದು ಎರಡು ಮೂರು ದಿನಗಳಾದ್ರೂ ಇದುವರೆಗೂ ಹರ್ಷನ ಮೊಬೈಲ್ ಫೋನ್ ಪತ್ತೆಯಾಗಿಲ್ಲ. ಅದು ಅಲ್ಲದೆ ಕೊನೆಯ ಕ್ಷಣದಲ್ಲಿ ಹುಡುಗಿ ಕಾಲ್ ಬಂದಿತ್ತು ಅಂತ ಹೇಳಲಾಗುತ್ತಿದೆ. ಹಾಗದ್ರೆ, ಆ ಹುಡುಗಿ ಯಾರು..? ಸಹಾಯಕ್ಕೆ ಆಕೆ ಕರೆದಿದ್ದಳಾ..? ಅದಕ್ಕಾಗಿಯೇ ಹರ್ಷ ಏಕಾಂಗಿಯಾಗಿ ಮನೆಯಿಂದ ಹೊರ ಬಂದನಾ..? ಈ ತರದ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಪ್ರಕರಣದ ಜಾಡು ಬೆನ್ನತ್ತಿರುವ ಶಿವಮೊಗ್ಗದ ಪೊಲೀಸರು ಬರೋಬ್ಬರಿ 6 ಆರೋಪಿಗಳನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ. ಆದ್ರೂ, ಕೊಲೆಗೆ ನಿರ್ದಿಷ್ಟ ಕಾರಣವನ್ನು ಪೊಲೀಸರು ಇದುವರೆಗೂ ಹೇಳಿಲ್ಲ. ತನಿಖೆ ಹಂತದಲ್ಲಿ ಇದೆ.. ವಿಚಾರಣೆ ನಡೀತಾ ಇದೆ ಅಂತ ಅಷ್ಟೇ ಪೊಲೀಸರು ಹೇಳ್ತಾ ಇದಾರೆ. ಅಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಹುಡುಗರು ಯಾಕೆ ಕೊಲೆ ಮಾಡಲು ಮುಂದಾದ್ರೂ..? ಶಸ್ತ್ರಸ್ತ್ರ ಪೂರೈಕೆ ಮಾಡಿದ್ದು ಯಾರು, ಕಾರ್ ಕೊಟ್ಟಿದ್ದು ಯಾರು ಅನ್ನೋದು ಇದುವರೆಗೂ ನಡೆದ ತನಿಖೆಯಿಂದ ಬಹಿರಂಗವಾಗಿಲ್ಲ. ಇಲ್ಲಿ ಇನ್ನೊಂದು ವಿಷ್ಯ ಹೇಳಬೇಕು. ಅದೇನಪ್ಪ ಅಂದ್ರೆ ಕೊಲೆ ಮಾಡಿದ ಆರೋಪಿಗಳು ಓಡಿ ಹೋಗಿಲ್ಲ. ಅದೇ ದಿನ ರಾತ್ರಿ ನದೀಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ರು. ಈ ಘಟನೆಗಳನ್ನು ನೋಡ್ತಾ ಇದ್ರೆ ವ್ಯವಸ್ಥಿತವಾಗಿ ಪ್ಲಾನ್ ಮಾಡಿ, ಕೃತ್ಯ ಎಸಗಲಾಗಿದೆ. ಕೊಲೆಯ ಹಿಂದಿರುವ ರೂವಾರಿ ಯಾರು..? ಅಸಲಿ ಕಾರಣ ಏನು ಅನ್ನೋದು ನಿಗೂಢವಾಗಿಯೇ ಇದೆ. ಹರ್ಷ ಪ್ರಕರಣ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.