ಶಿವಮೊಗ್ಗ : ಡಿಸೆಂಬರ್ ೨೬ರಂದು ಕಲ್ಲಹಳ್ಳಿ ವಿನೋಬನಗರದ ಮಹಾಗಣಪತಿ ದೇವಾಲಯದ ಹೊರ ಆವರಣದಲ್ಲಿ ಶ್ರೀಮದ್ ಭಾಗವತ್ ಕಥಾ ವಾಚನ ಪ್ರವಚನ ಹಾಗೂ ಜ್ಞಾನ ಮಹಾಯಾಗ ನಡೆಯಲಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾರ್ಯಕ್ರಮದ ಆಯೋಜಕರು, ಡಿಸೆಂಬರ್ ೨೬ರಿಂದ ಜನವರಿ ೧ರವರೆಗೆ ರಾಮ ಜನ್ಮಭೂಮಿ ಅಯೊಧ್ಯೆಯ ಸಂತ ಶ್ರೀ ಚೋಟೆ ಬಾಪೂಜಿಯವರು ಮಹಾಯಾಗ ಹಾಗೂ ಪ್ರವಚನ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಡಿಸೆಂಬರ್ ೨೬ರಂದು ಇವರು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಕಳಶ ಯಾತ್ರೆಯೊಂದಿಗೆ ಬರಮಾಡಿಕೊಳ್ಳಲಾಗುವುದು. ಭಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿಕೊಡಬೇಕಾಗಿ ಕೇಳಿಕೊಂಡರು.