ಸರಿಗಮಪ ಫೈನಲ್‌ಗೆ ಆಯ್ಕೆಯಾದ ಭದ್ರಾವತಿ ಪೋರಿ 

ಶಿವಮೊಗ್ಗ : ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೊ ಫೈನಲ್ ಶನಿವಾರ ನಡೆಯಲಿದೆ. ಈ ಹಾಣಾಹಣಿಯಲ್ಲಿ ಭದ್ರಾವತಿ ಪೋರಿ ವರ್ಣ ಚೌವಾಣ್ ಕೂಡ ಆಯ್ಕೆಯಾಗಿದ್ದಾರೆ.

ಗಾಯಕಿ ಅನುರಾಧ ಭಟ್ ಟೀಮ್ ಫಿನಾಲೆ ತಲುಪಿದ್ದು, ವರ್ಣ ಚೌವಾಣ್ ಕೂಡ ಅನುರಾಧ ಭಟ್ ತಂಡದಲ್ಲಿದ್ದಾರೆ. ಕನಸಿನ ರಾಣಿ ಎಂದೇ ಫೇಮಸ್ ಆಗಿರುವ ಇವರು ಫಿನಾಲೆಯಲ್ಲಿ ಗೆದ್ದು ಬರಲಿ ಎಂದು ಇಡೀ ಶಿವಮೊಗ್ಗ ಹಾಗೂ ಕರುನಾಡ ಜನತೆ ಹಾರೈಸುತ್ತಿದೆ.