ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ 

ಬೆಂಗಳೂರು : ಐತಿಹಾಸಿಕ ಕರಗ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ದೇಗುಲ ಆವರಣದಲ್ಲಿ ಧಾರ್ಮಿಕ ವಿಧಿಗಳು ನಡೆದವು. ನಸುಕಿನ 2 ಗಂಟೆ ವೇಳೆಗೆ ತಾಯಿ ದೌಪದಿ ದೇವಿಯ ಅಪ್ಪಣೆ ನಂತರ ಕರಗವನ್ನು ಭಕ್ತರು ಕಣ್ತುಂಬಿಕೊಂಡರು.

ಪ್ರತಿ ಬಾರಿಯಂತೆ ಈ ಬಾರಿಯೂ ಕರಗ ಮಹೋತ್ಸವ್ದಲ್ಲಿ ಮಸ್ತಾನ್ ದರ್ಗಾಕ್ಕೆ ಕರಗ ಪ್ರವೇಶಿಸಿತು. ದರ್ಗಾಕ್ಕೆ ಮುಸ್ಲಿಮರು ಸಾಂಪ್ರದಾಯಿಕ ಸ್ವಾಗತ ನೀಡದರು. ಸತತ ೩ ವರ್ಷಗಳ ಕೋವಿಡ್ ಅವಧಿಯ ನಂತರ ನಡೆಯುತ್ತಿರುವ ಉತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.