ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

ಶಿವಮೊಗ್ಗ : ಇಡೀ ಶಿವಮೊಗ್ಗ ಜಿಲ್ಲೆ ಕೊಲೆಗಡುಕರ ಜಿಲ್ಲೆಯಾಗಿದೆ. ಗಾಂಜಾ ಹಾಗೂ ಡ್ರಗ್ಸ್ ದಂದೆ ಶಿವಮೊಗ್ಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಈ ವಿಚಾರವಾಗಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ರು. ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿ ನಡೆಸಿ  ಮಾತನಾಡಿದ ಅವರು, ಹರ್ಷ ಮಾತ್ರ ಹಿಂದೂ ನಾ.. ಸಂತೋಷ್ ಪಾಟೀಲ್, ಹಂದಿ ಅಣ್ಣಿ ಹಿಂದೂ ಅಲ್ವಾ.. ಎಂದು ಪ್ರಶ್ನಿಸಿದ್ರು. ನಗರದಲ್ಲಿ ಹಾಡುಹಗಲೇ ಹಂದಿ ಹಣ್ಣಿ  ಕೊಲೆಯಾಗಿತ್ತು. ಇನ್ನು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಗುತ್ತೆ ಅನ್ನೋದು ಮೊದಲೇ ಗೊತ್ತಿದ್ದ ವಿಚಾರ. ಯಾಕೆಂದ್ರೆ ರಾಜ್ಯ ಸರ್ಕಾರ ಯಾವುದೇ ತನಿಖೆಯನ್ನು  ಪೊಲೀಸ್  ಇಲಾಖೆಗೆ ಕೊಟ್ರೆ ಸರ್ಕಾರದ ಪರವಾಗಿ ಮಾಡುತ್ತೆ ಎಂದ್ರು. 

ಬಿಎಸ್‌ವೈ ಶಾಪ ಈಶ್ವರಪ್ಪಗೆ ತಟ್ಟಲಿದೆ

ಯಡಿಯೂರಪ್ಪನವರ ಶಾಪ ಈ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ತಟ್ಟಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಣ್ಣಿರಿನಿಂದಲೇ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರು. ಬಿಎಸ್‌ವೈ ಕುಟುಂಬವನ್ನ ತಗೆಯಲು ಕೆ.ಎಸ್. ಈಶ್ವರಪ್ಪ, ಬಿ.ಎಲ್ ಸಂತೋಷ್, ಸಿಟಿ ರವಿ. ಪ್ರಹ್ಲಾದ್ ಜೋಷಿ ಹೊರಟಿದ್ದಾರೆ ಎಂದು ಆರೋಪಿಸಿದ್ರು.