ಶಿವಮೊಗ್ಗ : ಮಾಸ್ಕ್ ಇಲ್ಲದೆ ಅಥವಾ ಅನಗತ್ಯವಾಗಿ ಮನೆಯಿಂದ ಹೊರ ಬರುವ ಮುನ್ನ ಎಚ್ಚರ. ಹೌದು, ಕೋವಿಡ್ ಮೂರನೇ ಅಲೆ ತಡೆಟ್ಟಲು ರಾಜ್ಯ ಸರ್ಕಾರ ವಿಕೇಂಡ್ ಕರ್ಫ್ಯೂ ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಅನಗತ್ಯವಾಗಿ ಓಡಾಡುವವರ ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹಾಗೆಯೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಗೇಡ್‌ಗಳನ್ನ ಅಳವಡಿಸಿದ್ದು ಅನಗತ್ಯವಾಗಿ ಓಡಾಡುವ ವಾಹನಗಳನ್ನ ಪರಿಶೀಲನೆ ಮಾಡುತ್ತಿರುವ ದೃಷ್ಯ ಕಂಡುಬಂದವು.