ಹರ್ಷ ಮನೆಗೆ ಭೇಟಿ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ 

ಶಿವಮೊಗ್ಗ : ನಮ್ಮ ಪ್ರಾಣ ಹೋದರು ಪರವಾಗಿಲ್ಲ, ಹಿಂದೂ ಕಾರ್ಯಕರ್ತರ ಜೊತೆ ನಾವಿರುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಹತ್ಯೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಭೇಟಿ ನೀಡಿ, ಹರ್ಷನ ಕುಟುಂಬದವರಿಗೆ ಸಾಂತ್ವನ ಹೇಳಿ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಸಕರು, ಹಿಂದೂಗಳ ಸಮಾಧಿಯ ಮೇಲೆ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ಹಿಂದೂಗಳ ಹಾಗೂ ದೇಶದ ರಕ್ಷಣೆ ಮಾಡುವುದು ನಮ್ಮ ಪ್ರಥಮ ಕರ್ತವ್ಯ. ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ನಡೆಯದಂತೆ ಕಾನೂನು ವ್ಯವಸ್ಥೆಯನ್ನ ಸದೃಢಗೊಳಿಸಲಾಗುವುದು ಎಂದರು.