ದೆಹಲಿ : ಕೇಂದ್ರ ಸರ್ಕಾರದ ಪ್ರತಿಷ್ಠಿತ ಏರ್ ಇಂಡಿಯಾವನ್ನು ಟಾಟಾ ಕಂಪನಿಗೆ ಹಸ್ತಾಂತರ ಮಾಡಿದೆ. ಇದಕ್ಕೆ ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಕೂಡ ಸಾಕ್ಷಿಯಾಗಿದ್ದಾರೆ. ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತಿದ್ದಾರೆ.
ನಷ್ಟದಿಂದ ಮುಳುಗುತ್ತಿದ್ದ ಏರ್ ಇಂಡಿಯಾ ಈಗ ಮೂಲ ಮಾಲೀಕರು ಹಾಗೂ ಸ್ಥಾಪಕರ ಕೈ ಸೇರಿರುವುದರಿಂದ ಸೇವೆಯಲ್ಲಿ ಸುಧಾರಣೆಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಹಾರಾಟ ನಡೆಸುವ ನಿರೀಕ್ಷೆ ಇದೆ. ೬೯ ವರ್ಷದ ಬಳಿಕ ಮತ್ತೆ ಏರ್ ಇಂಡಿಯಾ ಟಾಟಾ ಕಂಪನಿಯ ತೆಕ್ಕೆಗೆ ಸೇರಿದೆ. ಬರೋಬ್ಬರಿ 18 ಸಾವಿರ ಕೋಟಿಗೆ ಏರ್ ಇಂಡಿಯಾವನ್ನು ಟಾಟಾ ಕಂಪನಿಗೆ ಮಾರಾಟ ಮಾಡಲಾಗಿದೆ.