ಕೇಂದ್ರ ದೂರ ಸಂಪರ್ಕ ಸಚಿವರನ್ನು ಭೇಟಿ ಮಾಡಿದ ಬಿವೈಆರ್

ದೆಹಲಿ : ಮಲೆನಾಡಿನಲ್ಲಿ ನೆಟ್‌ವರ್ಕ್ ಸಮಸ್ಯೆ ಮೊದಲಿನಿಂದಲೂ ತಾಂಡವ ವಾಡ್ತಾ ಇದೆ. ಹಲವಾರು ಬಾರಿ ಬಿಎಸ್‌ಎನ್‌ಎಲ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಮೀಟಿಂಗ್ ನಡೆಸಿದ್ರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಇದೀಗ ಮಲೆನಾಡಿನ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೆ ಮುಂದಾಗಿದ್ದಾರೆ. ಈ ವಿಚಾರವಾಗಿ ಕೇಂದ್ರ ದೂರ ಸಂಪರ್ಕ ಹಾಗೂ ರೈಲ್ವೆ ಮಂತ್ರಾಲಯದ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ರು.

ಹೊಸನಗರ, ಸಾಗರ, ತೀರ್ಥಹಳ್ಳಿಯ ಅನೇಕ ಹಳ್ಳಿ ಪ್ರದೇಶಗಳಲ್ಲಿ ಇನ್ನೂ ಕೂಡ ಸೂಕ್ತ ರೀತಿಯಲ್ಲಿ ನೆಟ್‌ವರ್ಕ್ ಸೌಲಭ್ಯ ಸಿಕ್ಕಿಲ್ಲ. ಬಹಳ ವರ್ಷಗಳಿಂದ ಜನರು ಸರ್ಕಾರಗಳ ಮುಂದೆ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ರು ಸಹ ಸಂಪೂರ್ಣ ಪರಿಹಾರ ಸಿಕ್ಕಿಲ್ಲ.

ಇದೀಗ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸಂಸದ ಬಿವೈಆರ್ ಕೇಂದ್ರ ಸಚಿವನ್ನು ಭೇಟಿ ಮಾಡಿ ನೆಟ್‌ವರ್ಕ್ ಸಮಸ್ಯೆಯಿಂದ ಜನರಿಗೆ ಆಗ್ತಾಯಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ರು. ಅಂದ್ಹಾಗೆ ಮನವಿ ಪತ್ರದಲ್ಲಿ ಹಳ್ಳಿಗಳ ಹೆಸರುಗಳನ್ನು ಕೂಡ ಉಲ್ಲೇಖಿಸಿದ್ದಾರೆ.