ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಆತ್ಮಹತ್ಯೆ 

ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ೨ ವರ್ಷಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಶಿವಕುಮಾರ್ ಮತ್ತು ಪದ್ಮಾವತಿಯ ಪುತ್ರಿಯಾಗಿರುವ ಸೌಂದರ್ಯ, ಎಸ್‌ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸ್ತಾ ಇದ್ರು.

ಬೆಳಗ್ಗೆ ನೇಣು ಬಿಗಿದುಕೊಂಡು ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಿಲು ಒಡೆದು, ಮೊದಲು ಮಲ್ಲಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಅಷ್ಟೊತ್ತಿಗಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮಾಜಿ ಸಿಎಂ ಬಿಎಸ್‌ವೈರ ಮಗಳು ಪದ್ಮಾವತಿ,  ಆ ಪದ್ಮಾವತಿಯವರ ಪುತ್ರಿಯೇ ಸೌಂದರ್ಯ. 2 ವರ್ಷದ ಹಿಂದೆ ನೀರಜ್ ಎಂಬುವರ ಜೊತೆ ವಿವಾಹವಾಗಿತ್ತು. 9 ತಿಂಗಳ ಪುಟ್ಟ ಕಂದ ಕೂಡ ಇದೆ. ಹೀಗಿರುವ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೋದ್ರ ಕುರಿತು ತನಿಖೆಯಿಂದಲೇ ಸತ್ಯ ಹೊರ ಬರಬೇಕಾಗಿದೆ. ನೇಣು ಬಿಗಿದ ಸ್ಥಳದಲ್ಲಿ ಯಾವುದೇ ರೀತಿಯ ಡೆತ್ ನೋಟ್ ಸಿಕ್ಕಿಲ್ಲ ಅನ್ನೋ ಮಾಹಿತಿ ಕನ್ನಡ ಮೀಡಿಯಂಗೆ ಲಭ್ಯವಾಗಿದೆ.