ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಹರ್ಷ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ.
ಹರ್ಷ ಸಾವಿನ ಬಳಿಕ ಆತನ ಪೋಷಕರು ಸರಿಯಾಗಿ ಊಟ ಮಾಡಿಲ್ಲ. ಹೀಗಾಗಿ ಸಚಿವ ಈಶ್ವರಪ್ಪ ಅವರನ್ನ ಸಮಾಧಾನ ಮಾಡಿಸಿ ಊಟ ಮಾಡುವಂತೆ ಒತ್ತಾಯಿಸಿದರು. ನೀವು ಪೋಷಕರಿಗೆ ಧೈರ್ಯ ಹೇಳಬೇಕೆಂದು ಹರ್ಷ ಸಹೋದರಿಯರಿಗೆ ಬಿ.ವೈ.ವಿಜಯೇಂದ್ರ ಹೇಳಿದರು. ನಳೀನ್ ಕುಮಾರ್ ಕಟೀಲ್ ಹರ್ಷ ಕುಟುಂಬಕ್ಕೆ ಸಹಾಯ ಧನ ನೀಡಿದರು.