ಕಾಂತರಾಜು ಆರೋಗ್ಯ ವಿಚಾರಿಸಿದ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗದಳ ಕಾರ್ಯಕರ್ತ ಕಾಂತರಾಜುನನ್ನು ಸಂಸದ ಬಿ.ವೈ.ರಾಘವೇಂದ್ರ ಭೇಟಿ ಮಾಡಿದ್ರು. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಂಸದರು ಘಟನೆಯ ಕುರಿತು ಕಾಂತರಾಜ್‌ನಿಂದ ಮಾಹಿತಿ ಪಡೆದುಕೊಂಡ್ರು. ಹಾಗೇನೆ ಆತನ ಕುಟುಂಬದವರಿಗೆ ಸಾಂತ್ವನ ಹೇಳಿದ್ರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರ್ಷಕೊಲೆ ಪ್ರಕರಣ ಮಾಸುವ ಮುನ್ನವೇ ಈ ಹಲ್ಲೆ ನಡೆದಿದೆ. ಈ ರೀತಿಯ ದುಷ್ಕೃತ್ಯಗಳನ್ನು ಪದೇ ಪದೇ ಮಾಡ್ತಾಯಿರುವ ಆರೋಪಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಇಂಥಹ ಕೃತ್ಯಗಳನ್ನು ಮಾಡುವವರಿಗೆ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನಹರಿಸಲಿವೆ ಎಂದ್ರು.

ಮುಸ್ಲಿಂ ಗೂಂಡಾಗಳು ಇಂಥಹ ಕೆಲಸ ಮುಂದುವರೆಸಿದ್ದಾರೆ - ಕೆಎಸ್‌ಈ 

ಹರ್ಷನ ಕೊಲೆ ಸಂದರ್ಭದಲ್ಲಿ ರಾಜೀವ್ ಗಾಂಧಿ ಬಡಾವಣೆಯ ಮುಸಲ್ಮಾನ್ ಹಿರಿಯರು ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಅಂತ ವಾಗ್ದಾನ ಮಾಡಿದ್ದರು. ಆದ್ರೆ ಅವರ ಮಾತು ಸುಳ್ಳಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ಅನ್ಯ ಕೋಮಿನ ಯುವಕರಿಂದ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಕಾಂತರಾಜ್ ಆರೋಗ್ಯ ವಿಚಾರಿಸಿ ಮಾಧ್ಯಮ ಪ್ರತನಿಧಿಗಳ ಜೊತೆ ಮಾತನಾಡಿದ ಅವರು, ಹಲ್ಲೆ ನಡೆಸಿದ ವೇಳೆ ಕಾಂತರಾಜ್ ತಲೆಯ ಮೇಲೆ ಅಡ್ಡಲಾಗಿ ಕೈ ಹಿಡಿದಿದ್ದಾನೆ. ಹೀಗಾಗಿ ಅದೃಷ್ಟವಶಾತ್ ಆತ ಬದುಕಿದ್ದಾನೆ. ಇಲ್ಲದಿದ್ದರೆ ಅವನ ತಲೆಯೂ ಕತ್ತರಿಸುತಿತ್ತು. ಮುಸಲ್ಮಾನ್ ಗೂಂಡಾಗಳು ಇಂತಹ ದುಷ್ಕೃತ್ಯ ಮುಂದುವರಿಸಿದ್ದಾರೆ. ಹಿಂದು ಸಮಾಜ ಸುಮ್ಮನೆ ಕೂರಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿಯೂ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಭರವಸೆ ನೀಡಿದ್ದಾರೆ ಎಂದ್ರು.