ಶಿವಮೊಗ್ಗ : ಆಜಾನ್ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡ್ತಾಯಿದ್ದೀರ. ಇದರ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಮಸೀಧಿಗಳ ಮೇಲೆ ಹಾಕಿರುವ ಹಾರ್ನ್‌ಗಳನ್ನು ತೆಗೆಸುವ ಅಭಿಯಾನ ಮಾಡ್ತೇವೆ ಎಂದು ಹಿಂದೂ ಮುಖಂಡ ದೀನದಯಾಳು ಎಚ್ಚರಿಸಿದ್ದಾರೆ.
ಆಜಾನ್ ಕುರಿತಾಗಿ ಮಾತನಾಡಿದ ಅವರು ಮಸೀಧಿಗಳಲ್ಲಿ ದಿನಕ್ಕೆ ಐದು, ಆರು ಬಾರಿ ಆಜಾನ್ ಕೂಗಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಸಾರ್ವಜನರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಮಸೀಧಿಯ ಆವರಣದಲ್ಲಿ ಮಾತ್ರ ನಿಮ್ಮ ಆಜಾನ್ ಕೇಳುವ ಹಾಗೆ ಆಗಬೇಕು. ಸುಪ್ರೀಕೋರ್ಟ್ ಆದೇಶದಂತೆ ನಡೆದುಕೊಳ್ಳಿ. ಇಲ್ಲವಾದಲ್ಲಿ ಮಸೀಧಿಗಳ ಮೇಲೆ ಹಾಕಿರುವ ಸ್ಪೀಕರ್‌ಗಳನ್ನು ತೆಗೆಸುವ ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.